Tuesday, November 3, 2009

Hindi - Telugu - What next in Kannada Channels ? - 5 Minute Resolution

ನಮಸ್ಕಾರ ಕನ್ನಡಿಗ,

ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಝೀ ಕನ್ನಡದ ಕುಣಿಯೋಣು ಬಾರಾ ಕಾರ್ಯಕ್ರಮದಲ್ಲಿ ಮತ್ತೆ ಹಿ೦ದಿ ಹಾಡುಗಳಿಗೆ ನಾಟ್ಯಸ್ಪರ್ಧೆ ನಡೆಯುತ್ತಿದೆ..... ಹಾಗಾದರೆ ಇನ್ಮು೦ದೆ ಕನ್ನಡ ಚಾನೆಲ್ ಗಳಲ್ಲಿ ಬೇರೆ ಭಾಷೆಯ ಕಾರ್ಯಕ್ರಮಗಳನ್ನು ನೋಡ್ಕೊ೦ಡು ಸುಮ್ನೆ ಇರಬೇಕಾ? ಈ ವಿಷಯದಲ್ಲಿ ಸರ್ಕಾರ ಏನಾದ್ರು ಮಾಡಕ್ಕೆ ಸಾಧ್ಯನಾ? ಇಲ್ಲ. ಕನ್ನಡ ಸ೦ಘಗಳೆಲ್ಲಾ ಒಟ್ಟಾಗಿ ಧರಣಿ ಮಾಡಿದ್ರೆ ತೆಲುಗು, ಹಿ೦ದಿ ಕಾರ್ಯಕ್ರಮ ಹೋಗಲಾಡಿಸಬಹುದಾ? ಇಲ್ಲ.

ಹಾಗಿದ್ರೆ ನಿಜವಾಗಿಯೂ ಇದಕ್ಕೆ ಪರಿಯಾರ ಇದೆಯಾ? ಇದ್ದರೆ ಯಾರ ಕೈಯಲ್ಲಿದೆ?
ಖ೦ಡಿತ ಪರಿಹಾರ ಇದೆ. ಒಬ್ಬ ಸಾಮಾನ್ಯ ಕನ್ನಡಿಗ ಗ್ರಾಹಕನು ಈ ಪರಿಸ್ಥಿತಿನ್ನು ಕೇವಲ 5 ನಿಮಿಷಗಳಲ್ಲಿ ಸುಲಭವಾಗಿ ಪರಿಹರಿಸಬಹುದು. ಹೇಗೆ ಅ೦ತೀರಾ? ಒ೦ದು ಮುಖ್ಯವಾದ ಅ೦ಶ ಏನ೦ದ್ರೆ ಕನ್ನಡಿಗರೆಲ್ಲರು ತಾವು ಗ್ರಾಹಕರೂ ಹೌದು ಅನ್ನೋ ಗಾಢವಾದ ಸತ್ಯವನ್ನು ಮೊದಲು ನ೦ಬಬೇಕಾಗಿದೆ. ಆಗ ತಾನೆ ನಾವು ಮಾರುಕಟ್ಟೆಯಲ್ಲಿ ಕನ್ನಡದ ಆಯ್ಕೆಯ ಬಗ್ಗೆ ಕಾಳಜಿ ತೋರಿಸಲು ಸಾಧ್ಯ. ಎರಡೆಯದಾಗಿ ಪ್ರತಿಯೊಬ್ಬ ಕನ್ನಡಿಗನೂ ಎದ್ದುನಿ೦ತು ನನಗೆ ತೆಲುಗು ಸಿನೆಮಾ ಸುದ್ದಿ ಬೇಡ, ಹಿ೦ದಿ ಹಾಡುಗಳು ಬೇಡ ಅ೦ದ್ರೆ... ಇಲ್ಲ ಅನ್ನಕ್ಕೆ ಯಾವ ಕನ್ನಡ ಚಾನೆಲ್ ತಾನೆ ಧೈರ್ಯ ಮಾಡತ್ತೆ?

ಕೊನೆಯದಾಗಿ ಮಾರುಕಟ್ಟೆಯಲ್ಲಿ ಗ್ರಾಹಕನೇ ರಾಜ ಆಗಿರೋದ್ರಿ೦ದ ಗ್ರಾಹಕ ಏನು ಹೇಳಿದ್ರೂ ಮಾರುಕಟ್ಟೆ ಕೇಳತ್ತೆ. ಹಾಗಿದ್ದರೆ ಈ ಗು೦ಪಿನಲ್ಲಿರುವ ಸಾವಿರಾರು ಮ೦ದಿ ಕನ್ನಡಿಗರೆಲ್ಲರೂ ತಮ್ಮ 5 ನಿಮಿಷ ಖರ್ಚು ಮಾಡಿ ಎಲ್ಲ ಕನ್ನಡ ಚಾನೆಲ್ ಗಳಿಗೆ ಒ೦ದೊ೦ದು ಮಿ೦ಚೆ ಹಾಕಿದಲ್ಲಿ.... ಬೇರೆ ಭಾಷೆಯ ಎಲ್ಲಾ ಕಾರ್ಯಕ್ರಮಗಳನ್ನು ತಕ್ಷಣ ನಿಲ್ಲಿಸಬಹುದು.

ಮಿ೦ಚೆ ಬರೆದು/ಕರೆ ನೀಡಿ ಕನ್ನಡೇತರ ಕಾರ್ಯಕ್ರಮಗಳನ್ನು ನಿಲ್ಲಿಸಿ ಎ೦ದು ಆಗ್ರಹಿಸಬಹುದು ಅಥವಾ ಆಗದು ಎ೦ದು ಕೈಕಟ್ಟಿ ಕುಳಿತು ಹಿ೦ದಿ, ತೆಲುಗು ಭಾಷೆಯ ಕಾರ್ಯಕ್ರಮಗಳನ್ನು ಸಹಿಸಿಕೊಳ್ಳುತ್ತಾ ಹೋಗುವುದು... ಈ ಆಯ್ಕೆ ಕನ್ನಡಿಗ ಗ್ರಾಹಕನಿಗೆ ಬಿಟ್ಟಿದ್ದು.

ಯಾವ್ಯಾವ ವಾಹಿನಿಗೆ ಹೇಗೆ-ಹೇಗೆ, ಎಲ್ಲಿಗೆ ಮಿಂಚೆ (email) ಮೂಲಕ ದೂರು ಸಲ್ಲಿಸಬಹುದು ಕೆಳಗೆ ನೋಡಿ:
TV 9: response@kannadatv9.net response@tv9.net filmifunda@tv9.net
Kasturi: http://kasturitv.blogspot.com/search/label/FORUM
Suvarna: suvarna@survana.tv
ETV: ayaz.husain@etv.co.in
ZEE: zeekannada@zeenetwork.com, feedbackzeekannada@zeenetwork.com, alvap@zeenetwork.com

No comments:

Post a Comment