Tuesday, May 7, 2013

Kallathi Falls near Kemmangundiಕಲ್ಲತ್ತಗಿರಿ ಜಲಪಾತ...:

ಬೆಳಕಲ್ಲೂ ಕಪ್ಪಾದಂಥ ದಟ್ಟ ಕಾಡು, ಚುಮು ಚುಮು ಚಳಿಯಲ್ಲಿ ಹೆಜ್ಜೆ ಹಾಕುತ್ತಿದ್ದರೆ ಸೂರ‌್ಯನ ಕಿರಣಗಳು ನಿಮ್ಮನ್ನು ಸ್ಪರ್ಶಿಸಲಿ ಅಂತ ಕಾಯುತ್ತಲೇ ಇರುತ್ತೀರ. ಆದರೂ ಪ್ರಕೃತಿ ಸೌಂದರ‌್ಯದ ನಡುವೆ ನಿಮ್ಮ ಮನಸ್ಸು ಗರಿಗೆದರಬೇಕು ಅಂತಾದ್ರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಕಲ್ಲತ್ತಗಿರಿ ಜಲಪಾತಕ್ಕೆ ಹೋಗಿ ಬನ್ನಿ.ಮನೆಯವರೆಲ್ಲ ದೇವಾಲಯಕ್ಕೆ ಹೋಗಬೇಕೆಂಬ ಹಂಬಲ ವ್ಯಕ್ತಪಡಿಸಿದರೆ ಮಕ್ಕಳಿಗೆ ಫಾಲ್ಸ್, ಟ್ರಕ್ಕಿಂಗ್ ಎಂದರೆ ಪ್ರಾಣ. ಈ ವಿಚಾರಕ್ಕೆ ಪ್ರಯಾಣದ ವಿಷಯ ತೆಗೆದರೆ ಮನೆಯಲ್ಲಿ ಸದಾ ಜಟಾಪಟಿ. ನಿಮ್ಮ ಮನೆ ಕಥೆಯೂ ಇದೆ ಆದರೆ ಕಲ್ಲತ್ತಗಿರಿ ನಿಮಗೆ ಸರಿಯಾದ ಪ್ರವಾಸಿ ಸ್ಥಳ. ಇಲ್ಲಿ ನಿಮಗೆ ದೇವರ ದರುಶನ ಸಾಧ್ಯ, ಜಲಧಾರೆಯಲ್ಲಿ ಮಿಂದೇಳುವ ಸಂಭ್ರಮವೂ ದೊರೆಯುತ್ತದೆ. ಚಾರಣ ಮಾಡಬೇಕೆಂಬ ಹಂಬಲವಿದ್ದರೆ ಗುಡ್ಡವನ್ನು ಏರಿ ಪ್ರಕೃತಿಯ ವಿಹಂಗಮ ನೋಟ ಸವಿಯಬಹುದು.ಬೆಟ್ಟ ಗುಡ್ಡಗಳ ಮೇಲಿಂದ ಹರಿಯುವ ಜಲಧಾರೆ ಅದೆಲ್ಲಿಂದ ಹುಟ್ಟುತ್ತದೆಯೋ?ಕಾಡುಗಳ ಮಧ್ಯೆ ಹರಿದು ಬರುತ್ತದಾದರಿಂದ ಚಾರಣ ಮಾಡುವಾಗ ನಿಮಗೆ ಅಲ್ಲಲ್ಲಿ ಜಲಧಾರೆ ಕಾಣಿಸುತ್ತದೆ. ಕೆಲ ಕಡೆಗಳಲ್ಲಿ ನೀರಿನಲ್ಲಿ ಆಟವಾಡಲು ಅನುಕೂಲ. ಒಂದಿಷ್ಟು ಸ್ನೇಹಿತರ ಜತೆಗೂಡಿ ಪ್ರಯಾಣ ಬೆಳೆಸಿದರೆ ಮಜವೋ ಮಜಾ.ಟ್ರೆಕ್ಕಿಂಗ್ ಮಜಾ


ದೇವಸ್ಥಾನದ ಪಕ್ಕದಲ್ಲಿ ಕಾಫಿ ತೋಟದ ಕಿರಿದಾದ ದಾರಿಯಲ್ಲಿ ಸ್ವಲ್ಪ ದೂರ ಕ್ರಮಿಸಿದರೆ ಜಲಧಾರೆ ಕಾಣಸಿಗುತ್ತದೆ. ಅಲ್ಲಿ ಬಂಡೆಗಳ ಮೇಲೆ ಹರಿಯುವ ನೀರಿನಲ್ಲಿ ಮಜಾ ಮಾಡಬಹುದು. ಕಾಫಿ ತೋಟದ ಮಧ್ಯದಲ್ಲಿ ಸಾಗುವ ಆ ಅನುಭವವೇ ಬೇರೆ. ಸ್ನೇಹಿತರೊಂದಿಗೆ ಒಟ್ಟಾಗಿ ಹೋದರಂತೂ ನಿಮ್ಮ ಖುಷಿಗೆ ಪಾರವಿಲ್ಲ. ತುಂಟಾಟ ಮಾಡುತ್ತ ಕಿರುಚುತ್ತಾ ಸಾಗುತ್ತಿದ್ದರೆ ಆಯಾಸದ ಪರಿವೆ ನಿಮಗಾಗದು. ಸಾಕಷ್ಟು ದೂರ ಕ್ರಮಿಸಿದ ನಂತರ ತೋಟ ಮುಗಿದು ಕಾಡು ಪ್ರಾರಂಭವಾಗುತ್ತದೆ. ಅಲ್ಲಲ್ಲಿ ನವಿಲ ನರ್ತನ, ಜಿಂಕೆಯ ಓಟ ಕಾಣಬಹುದು. ಅರಣ್ಯ ಪ್ರದೇಶವಾದ್ದರಿಂದ ಕತ್ತಲಾಗುವ ಮುಂಚೆ ಹೊರಟರೆ ಸೂಕ್ತ.ಜಲಪಾತದ ಸ್ಥಳವಾದ್ದರಿಂದ ಒಂದು ಜತೆ ಹೆಚ್ಚುವರಿ ಬಟ್ಟೆ ಕೊಂಡೊಯ್ಯುವುದನ್ನು ಮರೆಯದಿರಿ. ಟ್ರೆಕ್ಕಿಂಗ್‌ಗೆ ಬೇಕಾಗುವ ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಹೋಗಿ. ಪ್ರಥಮ ಚಿಕಿತ್ಸೆ ಬಾಕ್ಸ್‌ನ್ನು ನಿಮ್ಮ ಬ್ಯಾಗ್‌ನಲ್ಲಿ ಸೇರಿಸಲು ಮರೆಯದಿರಿ.


ಪ್ರಯಾಣದ ಸಮಯ


ಮಳೆಗಾಲ ಮತ್ತು ಚಳಿಗಾಲ ಈ ಜಲಧಾರೆಗೆ ಭೇಟಿ ನೀಡಲು ಸೂಕ್ತ ಸಮಯ. ಬೇಸಿಗೆಯಲ್ಲಿ ಬರಿ ಚಾರಣದ ಅನುಭವ ಮಾತ್ರ ನಿಮಗೆ ದೊರೆಯಬಹುದು. ಆದರೆ ಅಕ್ಟೋಬರ್, ನವೆಂಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸಾಕಷ್ಟು ನೀರು ಇರುವುದರಿಂದ ಜಲಪಾತದಲ್ಲಿ ಆಟವಾಡಲು ಮತ್ತು ಚಾರಣಕ್ಕೂ ಅನುಕೂಲ. ಬೆಳಗ್ಗೆಯಿಂದ ಸಂಜೆಯವರೆಗೂ ಜಲಪಾತದಲ್ಲಿ ಕಾಲ ಕಳೆದು ಸಂಜೆ ಇಲ್ಲಿಂದ 10 ಕಿ.ಮೀ ದೂರದಲ್ಲಿರುವ ಕೆಮ್ಮಣ್ಣುಗುಂಡಿಗೆ ಭೇಟಿ ನೀಡಿದರೆ ಸೂರ‌್ಯಾಸ್ಥ ವೀಕ್ಷಿಸಬಹುದು.

ಮಾರ್ಗ


ಈ ಜಲಪಾತ ಚಿಕ್ಕಮಗಳೂರು ಜಿಲ್ಲೆಯಿಂದ 55 ಕಿ.ಮೀ ಅಂತರದಲ್ಲಿದೆ. ಚಿಕ್ಕಮಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಪ್ರಯಾಣಿಸಿದರೆ ಮಾರ್ಗ ಮಧ್ಯೆ ತರೀಕೆರೆ ಸಿಗುತ್ತದೆ. ಇಲ್ಲಿಂದ ಆಟೋ ಅಥವಾ ಯಾವುದಾದರೂ ಬಾಡಿಗೆ ವಾಹನ ಮಾಡಿಕೊಂಡು ಈ ಜಲಪಾತಕ್ಕೆ ಕ್ರಮಿಸಬಹುದು. ನಿಮ್ಮದೇ ಸ್ವಂತ ಅಥವಾ ಬಾಡಿಗೆ ವಾಹನ ಮಾಡಿಕೊಂಡು ಪ್ರಯಾಣಿಸಿದರೆ ಅಲ್ಲಿ ಅನೇಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು.


ಆಹಾರ


ತರೀಕೆರೆಯಲ್ಲಿ ನಿಮಗೆ ಬೇಕಾದ ಊಟ, ತಿಂಡಿಯ ವ್ಯವಸ್ಥೆ ಮಾಡಿಕೊಂಡು ಜಲಪಾತಕ್ಕೆ ತೆರಳಿ. ಸಣ್ಣ ಪುಟ್ಟ ಗೂಡಂಗಡಿಗಳು ಮಾತ್ರ ಅಲ್ಲಿರುವುದರಿಂದ ಊಟದ ವ್ಯವಸ್ಥೆಗೆ ತರೀಕೆರೆಗೆ ಪ್ರಯಾಣಿಸಬೇಕಾಗುತ್ತದೆ.

ವಸತಿ


ಕೆಮ್ಮಣಗುಂಡಿಯಲ್ಲಿ ತೋಟಗಾರಿಕಾ ಇಲಾಖೆಯಿಂದ ನಡೆಸುತ್ತಿರುವ ವಸತಿ ಗೃಹವಿದೆ. ಆದರೆ ಇದಕ್ಕೆ ಮುಂಚಿತವಾಗಿ ಬುಕ್ ಮಾಡಿಸಬೇಕಾಗುತ್ತದೆ. ಇಲ್ಲವಾದರೆ ತರೀಕೆರೆಗೆ ಹೋಗಿ ತಂಗಬಹುದು.


ನಂದೀಶ ಬಿ ಎಂ
ಸಂಚಾರಿ ಚಾಲಕ (ಟೂರ್ಸ್& ಟ್ರಾವಲ್ಸ್)
ಬೆಂಗಳೂರು:
ಸಂಪರ್ಕಿಸಿ:9449202990

Kallathi Falls


Kallathi falls is about 10 km. from

Kemmangundi. On the road from Kemmangundi to Tarikere, a deviation takes one to Kallathi falls. It is also known as Kallathigiri falls and Kalahasthi falls. Water cascades from a height of 122 metres and the temple here is attributed to times of the Vijayanagar empire. According to a local legend, this place is associated with the Hindu sage, Agastya


Kalhatti Falls or Kalahasti Falls is located at Kallattipura in Chikmagalur district of Karnataka. The waterfall is only 10 kilometers away from Kemmangundi hill station. It offers an excellent view of the cascading water from the Chandra Drona Hill from 122 meters (400 ft) above in front of the Veerabhadreshwara Temple dedicated to Lord Shiva.The Legend
Legends say that sage Agastya had prayed for a long time in this place.The Veerabhadra temple is supposed to be built in the Vijayanagar times. The temple is with three stone carvings of three elephants at the entrance. Water cascade water over these elephants and devotees believes that these waters have the power to cure diseases.An annual fair of Lord Veerabhadra is held here for three day during March/April which attracts pilgrims from many parts of the state.Its also hot spot among the trekkers who carry out their trekking exercises on the adjoining hills and mountains. Trekkers climbing along the mountainous terrains enjoy the picturesque view. With base in Tarikere which is 35 km from Kemmangundi, trekkers climb the hill slopes to enjoy the panoramic view of the verdant valleys below.Location


Kalhatti Falls is located one hour from Birur (Birur - Kadur Taluk in Chikmagalur District). Birur is near Kadur, between Arsikere in Hassan Dist and Bhadravathi in Shimoga Dist. From Birur, Kalhatti is accessible through Lingadahalli.Distances from Kalhatti Falls

1. Kemmangundi: 10 km
2. Bangalore: 245 km
3. Mangalore: 180 kmHow to reach

• Nearest Railway Station: Birur
• Nearest Airport: Mangalore
• Nearest International airport: MangaloreThe route from Bangalore is through Tumkur - Tiptur - Arsikere - Kadur - Birur on NH206. The road from Birur to Lingadahalli is about 15 km from there, there is a fork whose left arm goes to Santaveri and continues towards Chikmagalur and the right arm goes towards Kalhatti falls and Kemmangundi.


How to get there: Birur is a junction well connected on the Bangalore-Shimoga, Bangalore-Kolhapur, Bangalore-Hubli or Yeshwantpur-Vasco routes. The Shimoga Express leaves Bangalore at 2310 and reaches Birur at an unearthly hour of 0315. Buses from Birur towards Lingadahalli are at 0545, 0630 and quite regularly after that. These buses take about 30 mins. You can hire private vehicles to take you till Kalhattigiri (another 30 min. ride on road)from where you can begin the trek.


Accommodation:


Accommodations are available at Horticulture Guest House, Kalhatti falls

Nandeesha Bm
sanchaari chaalaka (tours & travels )
bangaloore...........
contact no:9449202990

No comments:

Post a Comment