Wednesday, March 13, 2013

TV9 reporter Shivaprasad arrested for duplicate passport dealing

ನಕಲಿ ಪಾಸ್‌ಪೋರ್ಟ್ ದಂಧೆ: TV9 ಶಿವಪ್ರಸಾದ್ ಬಂಧನ......!!!!
ಶಿವ ಶಿವಾ ಕರ್ಣ ಕಟೋರ !!!
ಸುದ್ದಿ ನೋಡಿದೊಡನೆ ನಮಗೆಲ್ಲ ಅನ್ನಿಸಿದ್ದು ಬೇಲಿಯೇ ಎದ್ದು ಹೊಲ ಮೇದ್ದರೆ ಹೊಲ ಕಾಯುವವರು ಯಾರು ?
Shiva Prasad T R ಮುದ್ದು ಮುಖ ತೊದಲು ನುಡಿ, ಎಚ್. ಆರ್ . ರಂಗನಾಥ್ ತರ ತನಗೆಲ್ಲಾ ತಿಳಿದಿದೆ ಎಂಬ ಅಹಂ ಹೊಂದಿದ ಮನುಷ್ಯನಂತೆ ಕಾಣೋಲ್ಲ , ಹಾಗೇ ರಂಗನಾಥ್ ಭಾರದ್ವಾಜ್ ನಂತೆ ದಗಲ್ಬಾಜಿಯಂತೆಯು ಕಾಣೋಲ್ಲ ಸೀದಾ-ಸದಾನಂತೆ ಇದ್ದ ಶಿವ ಪ್ರಸಾದ್ ಇತ್ತೀಚಿಗೆ ಯಾಕೋ ದುಡ್ಡಿನ ಹಪ ಹಪಿಗೆ ಬಿದ್ದ ಹಾಗೆ ಇತ್ತು.
ನಕಲಿ ಪಾಸ್‌ಪೋರ್ಟ್ ತಯಾರಿಸಿ ಕೊಡುವ ಜಾಲದಲ್ಲಿ ಸಕ್ರಿಯರಾಗಿರುವ ಗುರುತರ ಆರೋಪದ ಮೇಲೆ ಶಿವಪ್ರಸಾದ್ ರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಬಯಲಿಗೆ ಬಂದಿರುವುದು ಸ್ವತಃ ಟಿವಿ9 ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ. ಸ್ಟಿಂಗ್ ಆಪರೇಷನ್ ಹಿನ್ನೆಲೆಯಲ್ಲಿ ಟಿವಿ9 ವರದಿಗಾರರಿಗೆ ಬರುತ್ತಿದ್ದ ಕೊಲೆ ಬೆದರಿಕೆ ಜಾಡು ಹಿಡಿದ ಪೊಲೀಸರಿಗೆ ಅದೇ ವಾಹಿನಿಯ ಶಿವಪ್ರಸಾದ್ ವಿರೋಧಿ ತಂಡದಲ್ಲಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಪ್ರಸಾದ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ. ಲಕ್ಷಗಟ್ಟಲೆ ಹಣ ಕೊಟ್ಟರೆ ನಕಲಿ ಪಾಸ್‌ಪೋರ್ಟ್ ತಯಾರಿಸಿ ಕೊಡಲಾಗುತ್ತದೆ ಎಂಬ ಮಾಹಿತಿ ಪಡೆದಿದ್ದ ಟಿವಿ9ನ ವರದಿಗಾರ ಶಂಕರ್ ಮತ್ತು ಇನ್ನೊಬ್ಬ ವರದಿಗಾರ ಕೆಲವು ತಿಂಗಳುಗಳ ಹಿಂದೆಯೇ ರಹಸ್ಯ ಕಾರ್ಯಾಚರಣೆ ನಡೆಸಿ, ನಕಲಿ ದಂಧೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಆದರೆ ಆ ವರದಿ ಪ್ರಸಾರ ಆಗುವ ಮೊದಲೇ ಅಪರಿಚಿತರಿಂದ ವರದಿಗಾರರಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿದವು. ವರದಿಯನ್ನು ಪ್ರಸಾರ ಮಾಡಿದರೆ ಸುಮ್ಮನಿರುವುದಿಲ್ಲ ಎಂಬ ಬೆದರಿಕೆ ಬಂತು.ಇದರಿಂದ ಗಾಬರಿಗೊಂಡ ವರದಿಗಾರರು ಎಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದರು. ಅಲ್ಲಿಂದ ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿತ್ತು. ವರದಿಗಾರರಿಗೆ ಬಂದ ಬೆದರಿಕೆ ಕರೆಗಳ ದಾಖಲೆ ಪರಿಶೀಲಿಸಿದಾಗ, ಶಿವಪ್ರಸಾದ್ ಮೊಬೈಲ್‌ನಿಂದ ಕರೆ ಹೋಗಿರುವುದು ಪತ್ತೆಯಾಯಿತು. ರಹಸ್ಯ ಕಾರ್ಯಾಚರಣೆ ಕುರಿತ ವರದಿ ಪ್ರಸಾರವಾಗುವ ಮೊದಲೇ ಈ ಕುರಿತು ದಂಧೆಯ ಮಂದಿಗೆ ಮಾಹಿತಿ ನೀಡಿದ್ದು ಶಿವಪ್ರಸಾದ್ ಎನ್ನುವುದು ಪೊಲೀಸರ ಆರೋಪ. (ಸುದ್ದಿ ಮೂಲ :- ವೆಬ್ ದುನಿಯಾ ಕನ್ನಡದಿಂದ)
tv೯ ಯಿಂದ ಸಮಯಕ್ಕೆ ಹೋಗಿ ಮತ್ತೆ tv೯ ಗೆ ಬಂದ ಶಿವ ಪ್ರಸಾದ್ ನವೆಂಬರ್ ಕೊನೆಯಲ್ಲಿ ಅಲ್ಲಿ ಏನೋ ಯಡವಟ್ಟು ಮಾಡಿಕೊಂಡ ಹಾಗೇ ಕಾಣುತಿತ್ತು . ತಮ್ಮ ಫೇಸ್ಬುಕ್ ಪ್ರೊಫೈಲ್ ನಲ್ಲಿ f **k Tv9-Kannada.. _____ _____ _____ (ಡ್ಯಾಶ್ ಡ್ಯಾಶ್ ಡ್ಯಾಶ್ ) ಅಂತೆಲ್ಲಾ ಬರೆದು ತಮ್ಮ ಬನಿಯಾನು ಹರಿದುಕೊಂಡು,ತಾನು ಕೆಲಸ ಮಾಡುತಿದ್ದ ಸಂಸ್ಥೆಗೆ ಬೈದು ವದೆ ತಿಂದು ಬಂದವರ ಹಾಗೇ ಇದ್ದ ಒಂದು ಚಿತ್ರ upload ಮಾಡಿದ್ದರು . ಆದರೆ ಅದು ಕೆಲವೇ ಕ್ಷಣದಲ್ಲಿ remove ಆಗಿತ್ತು. ಕೆಲವು ಫೇಸ್ಬುಕ್ ಮಿತ್ರರು ಏನೇನೊ ಹೇಳಿದರು ಬಿಡಿ ಅದು ಅವರ ವಯುಕ್ತಿಕ ಇರಬಹುದು.
ಅದಾದ ನಂತರ ಶಿವಪ್ರಸಾದ್ ರು ಅರವಿಂದ ಲಿಂಬಾವಳಿ MBBS ಎನ್ನೋ ಒಂದು ರಹಸ್ಯ ಕಾರ್ಯಾಚರಣೆಯ ಕಾರ್ಯಕ್ರಮ ಸಂಜೆ ೬.೩೦ ಕ್ಕೇ ಪ್ರಸಾರ ಮಾಡಿದ್ರು. ಅಸಲಿಗೆ ಈ ರಹಸ್ಯ ಕಾರ್ಯಚರಣೆಗೂ , Arvind Limbavali ಯವರಿಗೂ ಯಾವುದೇ ಸಂಬಂದವಿಲ್ಲಾ . ಅದೊಂದು PAID PROGRAM.ಯಡಿಯೂರಪ್ಪನವರ ವಿರೋಧಿ ಬಣದಲ್ಲಿ ಇದ್ದ ಲಿಂಬಾವಳಿಯವರ ತೇಜೋವಧೆ ಮಾಡಲೆಂದೇ ಯಡಿಯೂರಪ್ಪನವರ ಚೇಲಾರಾಗಿದ್ದ ಶಿವಪ್ರಸಾದ್ ರು ಮಾಡಿದ ಕಾರ್ಯಕ್ರಮ ಅದಾಗಿತ್ತು . ಅದರ ಬಗ್ಗೆ ಕೇಸ್ ಕೂಡ ದಾಖಲಿಸಲಾಗಿದೆ.
ಜೊತೆಗೆ ಇತ್ತೀಚಿಗೆ ಶಿವ ಪ್ರಸಾದರು "ದಯಾಮಯಿ" ಯೋರ್ವರ ಕಡೆ ತಮ್ಮ ಗಮನ ಹರಿಸಿದಂತೆ ಇತ್ತು . ಅವರ ಫೇಸ್ಬುಕ್ ಪ್ರೊಫೈಲ್ ಚಿತ್ರ , ಕವರ್ ಫೋಟೋ ಎಲ್ಲ ಆ ದಯಾಮಯಿಯತ್ತ "ಮತಾಂತರಿಸಿದ್ದರು." ಒಟ್ಟಿನಲ್ಲಿ ಗೊಂದಲದಲ್ಲಿ ಇದ್ದದ್ದು ಸ್ಪಷ್ಟ.

ಅದೇನೇ ಇರಲಿ ಜನರು ರಾಜಕಾರಣಿ ಗಳ ಭ್ರಷ್ಟಾಚಾರ ದಿಂದ ಬೇಸತ್ತು ಅವರುಗಳ ಭ್ರಷ್ಟಾಚಾರ ಕ್ಕೆ ಕಡಿವಾಣ ಹಾಕಲು "ಉತ್ತಮ ಸಮಾಜ " ಕ್ಕೆ ಮಾದ್ಯಮಗಳು ಬೇಕು ಎನ್ನುವಾಗ ಈ ಮಾದ್ಯಮದ ಮಂದಿ ಹೀಗೆ ಮಾಡುವುದು ತರವೇ ? ಆರು ತಿಂಗಳ ಹಿಂದೆ ಶಂಕಿತ ಉಗ್ರರೆಂದು ಒಂದಿಷ್ಟು ಮಂದಿ ಪತ್ರಕರ್ತ ರೆಂದು ಪೊಲೀಸರು ಬಂದಿಸಿರುವುದು , ಪರಮ ಸಾಚಾರಂತೆ ಇದ್ದ ರಂಗನಾಥ್ ರ "ಲಂಚಾವತಾರ" ದ ಬಗ್ಗೆ ಮಾಸ್ಟರ್ ಹಿರಣ್ಯಯ್ಯ ನವರು ಇತ್ತೀಚಿಗೆ ಮೈಸೂರಿನಲ್ಲಿ ವಿವರಿಸಿರುವುದು , ಶಿವ ಪ್ರಸಾದ್ ರ ನಕಲಿ ಪಾಸ್ಪೋರ್ಟ್ ದಂಧೆ !!!
ಇನ್ನೊಬ್ಬರ ತಪ್ಪು ಕಂಡು ಹಿಡಿದು ಪೋಸ್ ಕೊಟ್ಟು ,ತಾವೇ ನ್ಯಾಯದೀಶರು ಎನ್ನುವ ಹಾಗೇ ವರ್ತಿಸುವ ಈ ಮಾದ್ಯಮ ದವರ ನೈತಿಕತೆ ಏನು ? ಎಲ್ಲರೂ ಹೀಗೆ ಇರಲಿಕಿಲ್ಲ.. ಈ ಘಟನೆ ಉಳಿದ ಮಾದ್ಯಮ ಮಿತ್ರರಿಗೆ ಎಚ್ಚರಿಕೆ ಘಂಟೆಯಾಗಲಿ .. ಇನ್ಯಾರು ಇಂಥ ಅನೈತಿಕ ಹಾದಿ ತುಳಿಯದಿರಲಿ , ನಾವು ಮಾದ್ಯಮದ ಮೇಲೆ ಇಟ್ಟಿರುವ ನಂಬಿಕೆ , ಗೌರವ ಹುಸಿಯಾಗದಿರಲಿ ಎನ್ನುವ ಆಶಯದೊಂದಿಗೆ

No comments:

Post a Comment