Wednesday, March 31, 2010

ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ಭಾಷೆಯಾಗಿ ತುಳುವನ್ನು ಕಲಿಸುವ ನಿರ್ಧಾರ ಸರ್ಕಾರ ಕೈಗೊಂಡಿದೆ


ಸಾವಿರಾರು ವರ್ಷಗಳಷ್ಟು ಹಳೆಯದಾದ, ಕನ್ನಡ ನಾಡಲ್ಲಿ ಕನ್ನಡದೊಡನೆ ಶತಶತಮಾನಗಳ ನಂಟು ಹೊಂದಿರುವ ಕರ್ನಾಟಕದ ಭಾಷೆಗಳಲ್ಲಿ ಒಂದಾದ ತುಳುವನ್ನು ಪ್ರಾಥಮಿಕ ಶಾಲಾ ಹಂತದಲ್ಲಿ ಪರಿಚಯಿಸುವ ಮೂಲಕ ತುಳುವನ್ನು ಉಳಿಸುವ, ಬೆಳೆಸುವ ಈ ನಡೆ ಸರಿಯಾದದ್ದು.
ತಾಯ್ನುಡಿಯಲ್ಲಿ ಶಿಕ್ಷಣ ಏಳಿಗೆಗೆ ದಾರಿ

ಯಾವುದೇ ಭಾಷಾ ಜನಾಂಗದ ಏಳಿಗೆ ಅತ್ಯುತ್ತಮವಾಗಲು ಅವರಾಡುವ ಭಾಷೆ ಕೇವಲ ಮಾತಿನ ರೂಪದಲ್ಲಷ್ಟೇ ಉಳಿಯದೇ, ಶಾಲೆಯಲ್ಲಿ ಕಲಿಕೆಯ ರೂಪ ಪಡೆದುಕೊಳ್ಳುವುದು ಒಂದು ಮುಖ್ಯ ಹಂತ. ಇವತ್ತು ತುಳುವಿಗೆ ಅಂತಹ ಸಾಧ್ಯತೆ ಸಿಗುತ್ತಿರುವುದು ತುಳುವರ ಏಳಿಗೆಯ ದೃಷ್ಟಿಯಿಂದ ಒಳ್ಳೆಯದು