Tuesday, December 8, 2009
ಅವಿರತ ಸಾರ್ಥಕ ಸ್ಪಂದನ-ನೆರವಿಗಾಗಿ ಗಾಯನ
ಕನ್ನಡ ನಾಡು ನುಡಿಗಾಗಿ ನಿರಂತರವಾಗಿ ಸ್ಪಂದಿಸುವ ಅವಿರತ ಟ್ರಸ್ಟ್ ಉತ್ತರಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳಲ್ಲಿ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದೆ. ಹಣಸಂಗ್ರಹಕ್ಕಾಗಿ ಖ್ಯಾತ ಗಾಯಕ ರಘು ದೀಕ್ಷಿತ್ ಅವರ ರಸಸಂಜೆ ಕಾರ್ಯಕ್ರಮ ಹಾಗೂ ಸ್ನೇಹಾ ನಂದಗೋಪಾಲ್ ಅವರ ಭ್ರಮರಿ ತಂಡದಿಂದ ನೃತ್ಯ ಪ್ರದರ್ಶನವನ್ನು ಡಿ.13 ಭಾನುವಾರದಂದು ನಗರದಲ್ಲಿ ಅಯೋಜಿಸಿದ್ದಾರೆ.
ಶಾಲೆಗಳ ನಿರ್ಮಾಣಕ್ಕಾಗಿ 'ಸಾರ್ಥಕ ಸ್ಪಂದನ ' ಎಂಬ ಸಹಾಯಾರ್ಥ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ 16 ಲಕ್ಷದ ಅವಶ್ಯಕತೆ ಇದೆ. ಈ ಕಾರ್ಯಕ್ರಮಕ್ಕೆ ನಾವು 2000ರೂ ಮತ್ತು 1000 ರೂ ಗಳ ದಾನಿಗಳ ಪಾಸ್ ಗಳನ್ನು ನಿಗದಿಪಡಿಸಿದ್ದೇವೆ. ನಮ್ಮ ಈ ಕಾರ್ಯಕ್ಕೆ ಕನ್ನಡವೇ ಸತ್ಯ ಖ್ಯಾತಿ ಗ್ಲೋಬಲ್ ಸಂಸ್ಥೆ, ಹಾಲಪ್ಪ ಫೌಂಡೇಶನ್ಸ್, ಕದಂಬ ಸಂಸ್ಥೆ ಕೈ ಜೋಡಿಸಿವೆ. ಪಾಸ್ ಬೇಕಾದವರು ಸಂಪರ್ಕಿಸಿ. ನೀವು ಕೊಡುವ ಹಣವನ್ನು ಸಂಪೂರ್ಣವಾಗಿ ಶಾಲೆ ಕಟ್ಟಿಸಲು ಉಪಯೋಗಿಸಲಾಗುವುದು ಎಂದು ಅವಿರತ ಟ್ರಸ್ಟ್ ನ ಅಧ್ಯಕ್ಷ ಕೆಟಿ ಸತೀಶ್ ಗೌಡ ದಟ್ಸ್ ಕನ್ನಡಕ್ಕೆ ತಿಳಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು, ಬೆಂಗಳೂರು
ದಿನಾಂಕ/ಸಮಯ: ಡಿ.13, ಭಾನುವಾರ, ಸಂಜೆ 5ರ ನಂತರ.
ಪಾಸ್ ಗಳಿಗಾಗಿ ಸಂಪರ್ಕಿಸಿ: 99723 41199; 99029 45745 ಅಥವಾ
99000 99000 ಗೆ 'PASS' ಎಂದು SMS ಮಾಡಿ
ಆನ್ ಲೈನ್ ಮೂಲಕ ಪಾಸ್ ಕಾಯ್ದಿರಿಸಲು http://www.indianstage.in/events/aviratha.htm ಗೆ ಭೇಟಿ ಕೊಡಿ
[ಸೂಚನೆ: ಎಲ್ಲಾ ದೇಣಿಗೆಗಳು ಸೆಕ್ಷನ್ 80 G ತೆರಿಗೆ ವಿನಾಯಿತಿಗೆ ಒಳಪಟ್ಟಿದೆ]
ಮೊದಲನೇ ಹಂತದಲ್ಲಿ ಕೈಗೊಂಡ ಕಾರ್ಯಕ್ರಮಗಳು:
*ಉತ್ತರ ಕರ್ನಾಟಕದ ಹಳ್ಳಿಗಳ ಸ್ಚಚ್ಛತಾ ಕಾರ್ಯಕ್ರಮ
*ಕೊಪ್ಪಳ ಜಿಲ್ಲೆ ಮುದ್ದಲಾಪುರದ 350 ಕುಟುಂಬಕ್ಕೆ ನೆರೆ ಪರಿಹಾರ
*ಪ್ರತಿ ಕುಟುಂಬಕ್ಕೆ10 ಕ್ವಿಂಟಾಲ್ ಅಕ್ಕಿ,ಹೊಸಬಟ್ಟೆ, ಹಾಸಿಗೆ ಹಾಗೂ ಹೊದಿಕೆಗಳ ಪ್ಯಾಕೇಜ್
*ಗ್ರಾಮದ ಶಾಲಾ ಆವರಣದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ಥಾಪನೆ
*ಗ್ರಾಮದ ಪ್ರತಿಯೊಬ್ಬರ ವೈದ್ಯಕೀಯ ತಪಾಸಣೆ, ಸಾಂಕ್ರಾಮಿಕ ರೋಗ ನಿರೋಧಕ ಚಿಕಿತ್ಸೆ
* ಸುತ್ತಮುತ್ತಲ ಹಳ್ಳಿಗಳಲ್ಲಿ ಸಂಚಾರ ಸುಮಾರು 350 ಕ್ಕೂ ಅಧಿಕ ಸಂತ್ರಸ್ತರ ಮನೆಗಳಿಗೆ ಭೇಟಿ
*ಒಟ್ಟಾರೆಯಾಗಿ 1000 ರು ಪ್ಯಾಕೇಜ್ ನಂತೆ 1500ಜನ ಸಂತ್ರಸ್ತರಿಗೆ ಪ್ರಯೋಜನ ಸಿಕ್ಕಿದೆ
ಅವಿರತ ಟ್ರಸ್ಟ್ ನ ಸಂಕ್ಷಿಪ್ತ ಹಿನ್ನೆಲೆ
ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ, ವೃತ್ತಿ ಕೌಶಲ್ಯ ತರಬೇತಿ, ಹಳ್ಳಿಗರಿಗೆ ಆರೋಗ್ಯದ ಮಹತ್ವ, ಚಿಕಿತ್ಸೆ ಸೇರಿದಂತೆ ಕನ್ನಡ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಅವಿರತ ಟ್ರಸ್ಟ್ ತೊಡಿಗಿಸಿಕೊಂಡಿದೆ. ಡಾ. ರಾಜ್ ಗೀತ ನಮನ, ಪೂರ್ಣಚಂದ್ರ ತೇಜಸ್ವಿ ಸ್ಮರಣೆ, ಕುವೆಂಪು ಜನ್ಮಶತಮಾನೋತ್ಸವ ಸಮಾರಂಭ ಅವಿರತ ಯಶಸ್ವಿಯಾಗಿ ಸಾದರಪಡಿಸಿದ ಈ ವರೆಗಿನ ಸಾಂಸ್ಕೃತಿಕ ಕಾರ್ಯಕ್ರಮಗಳು. ಇದಲ್ಲದೆ ಸದಭಿರುಚಿ ಚಲನಚಿತ್ರಗಳ ಪ್ರದರ್ಶನ, ಸಂವಾದವನ್ನು ಪ್ರಪ್ರಥಮ ಬಾರಿಗೆ ಆರಂಭಿಸಿ, ಕನ್ನಡ ನಿರ್ಮಾಪಕರಿಗೆ ಚೇತನವನ್ನು, ಪ್ರೇಕ್ಷಕರಿಗೆ ಉತ್ತಮ ಚಿತ್ರಗಳನ್ನು ತೋರಿಸಿ ಸೈ ಎನಿಸಿಕೊಂಡಿದೆ.
ಆರಕ್ಕೂ ಅಧಿಕ ಗ್ರಾಮೀಣ ಭಾಗಗಳಲ್ಲಿ ವೃತ್ತಿ ಕೌಶಲ್ಯ ತರಬೇತಿ(career guidance program) ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅವಿರತ ಸಂಸ್ಥೆಯ ಸದಸ್ಯರು ಹೆಚ್ಚಿನವರು ಐಟಿ ರಂಗದವರಾದರೂ, ಪರಭಾಷಾ ಚಲನಚಿತ್ರ ಪ್ರದರ್ಶನ, ಎಫ್ ಎಂ ಗಳಲ್ಲಿ ಕನ್ನಡೇತರ ಹಾಡುಗಳ ಪ್ರಸಾರ ಮುಂತಾದ ಕನ್ನಡ ವಿರೋಧಿ ಕೆಲಸಗಳ ವಿರುದ್ಧ ಹೋರಾಡಲು ಬೀದಿಗಿಳಿದು ತಕ್ಕಮಟ್ಟಿನ ಪರಿಹಾರವನ್ನು ಕಂಡಿದ್ದಾರೆ. ಅವಿರತದಲ್ಲಿ ಈಗ ಕಡಿಮೆಯೆಂದರೂ 4ಸಾವಿರ ಸದಸ್ಯರು(ಆನ್ ಲೈನ್ ಗ್ರೂಪ್) 100ಕ್ಕೂ ಅಧಿಕ ಸಕ್ರಿಯ ಕಾರ್ಯಕರ್ತರಿದ್ದಾರೆ.
No comments:
Post a Comment