Tuesday, August 14, 2012

Mushroom Masala


ಅಣಬೆ ಮಸಾಲ
ಬೇಕಾಗುವ ಸಾಮಾನುಗಳು:
2 ಕಪ್ ಅಣಬೆ(Mushroom),
1 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ,
1 ಕಪ್ ಟೊಮ್ಯಾಟೊ,
2 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಮತ್ತು ಹಸಿ ಶುಂಠಿ,
2 ಟೇಬಲ್ ಸ್ಪೂನ್ ಎಣ್ಣೆ,
2 ಟೇಬಲ್ ಸ್ಪೂನ್ ಚಿಕನ್ ಮಸಾಲ,
ಉಪ್ಪು ರುಚಿಗೆ ತಕ್ಕಸ್ಟು,
1/2 ಟೇಬಲ್ ಸ್ಪೂನ್ ಹರಿಸಿನ,
ಮಾಡುವ ವಿದಾನ:
1.ಒಲೆಯ ಮೇಲೆ ಒಂದು ಪಾತ್ರೆ ಯನ್ನು ಇಟ್ಟು,ಅದಕ್ಕೆ ಎಣ್ಣೆ
ಹಾಕಬೇಕು,ಎಣ್ಣೆ ಬಿಸಿ ಆದಮೇಲೆ,ಹೆಚ್ಚಿದ ಈರುಳ್ಳಿ
ಮತ್ತು ಬೆಳ್ಳುಳ್ಳಿ ಮತ್ತು ಹಸಿ ಶುಂಠಿ
ಯನ್ನು ಹಾಕಬೇಕು.ಚೆನ್ನಾಗಿ ಫ್ರೈ ಮಾಡಬೇಕು.
2.ನಂತರ ಇದಕ್ಕೆ ಟೊಮ್ಯಾಟೊ,ಕತ್ತರಿಸಿದ ಅಣಬೆ
(Mushroom),ಹರಿಸಿನ ವನ್ನು ಹಾಕಿ ಚೆನ್ನಾಗಿ ಮಿಶ್ರ
ಮಾಡಬೇಕು.
3.ನಂತರ ಇದಕ್ಕೆ ಉಪ್ಪು ರುಚಿಗೆ ತಕ್ಕಸ್ಟು,ಚಿಕನ್ ಮಸಾಲ
ಹಾಕಿ,12 ರಿಂದ 15 ನಿಮಿಷ ಗಳ ಬೇಯಿಸಿದರೆ ಅಣಬೆ ಮಸಾಲ
(Mushroom Masala) ಸಿದ್ದವಾಗುತದೆ.

Sunday, August 12, 2012

ಶ್ರೀ ಕ್ಷೇತ್ರ ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ


1. ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಪವಿತ್ರ ನದಿ ಕುಬ್ಜೆ ಮತ್ತು ನಾಗ ತೀರ್ಥ ಉಕ್ಕಿ ಹರಿದು ಶ್ರೀದೇವಿಯ ಪಾದಗಳನ್ನು ತೊಳೆದ ಕ್ಷಣಗಳು.
ಪ್ರತಿ ವರ್ಷವೂ ಹೀಗೆ ನಡೆಯುತ್ತದೆ.
2. ತೀರ್ಥಸ್ನಾಕ್ಕಾಗಿ ಸೇರಿದ ಸುತ್ತ ಏಳು ಗ್ರಾಮದ ಜನ.
3. ನದಿಯ ನೀರು ದೇವಳದ ಒಳ ಭಾಗವನ್ನು ಪ್ರವೇಶಿಸುವ ಸ್ಥಳ
4. ಉಕ್ಕಿ ಹರಿವ ಕುಬ್ಜೆ . ಪಿ೦ಗಳೆ ಎ೦ಬ ದೇವಲೋಕದ ನರ್ತಕಿ ತನ್ನ ಪಾಪ ಕಳೆಯಲು ಶ್ರೀಕ್ಷೇತ್ರದಲ್ಲಿ ಕುಬ್ಜೆಯಾಗಿ ಹರಿದು, ಪ್ರತಿ ವರ್ಷ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿಯ ಪಾದವನ್ನು ತೊಳೆಯುವಳು ಎ೦ಬ ಪ್ರತೀತಿ ಇದೆ.

Haladi Shrinivasa shetty

ನಿಜಕ್ಕೂ ಕೆಸರಿನಲ್ಲಿ ಅರಳಿದ ಕಮಲ ವೆಂದರೆ ನೀವೇ
ಇದು ನಿಮಗೊಬರಿಗೆ ಆದಾ ಅನ್ಯಾಯ ವಲ್ಲ ಇಡಿ ಕುಂದಾಪುರದ ಜನತೆ ಗೆ ಅದ ಅನ್ಯಾಯ
ನಿಮಗೆ ನಮ್ಮ ಬೆಂಬ ಲ ನಿಮ್ಮೊಂದಿಗೆ ನಾವು
ನೀವು ಬಿ ಜೆ ಪಿ ಗೆ ಅನಿವಾರ್ಯ ನಿಮಗೆ ಬಿ ಜೆ ಪಿ ಅನಿವಾರ್ಯ ಅಲ್ಲಾ ಅಣ್ಣಾ

Padmashree Chittani Ramachandra Hegade

ನಿನ್ನಯಾ ಬಲು ಹೇನು ಮಾರುತಿ ...
ಅಬ್ಬಾಎಂಥ ಕುಣಿತಾ
ಹವುದು 61ವರ್ಷಗಳ ಕಾಲ ಯಕ್ಷರಂಗದ ಅನಬಿಷಿಕ್ತ ದೋರೆ ಯಾಗಿ ಮೇರೆದು...ಅಬಿಮಾನಿಗಳೇ ಅಂತ ರಂಗದ ದೇವರೆಂದು ತಿಳಿದು
ಪ್ರಸಂಗ ಒಂದೇ ಆದರು ದಿನಕೊಂದು ರೀತಿಯಲ್ಲಿ ಕುಣಿದು ಯಕ್ಷ ರಸಿಕನ ಮನಕ್ಕೆ ರಸ ದ್ವುತಣ ನೀಡಿ ಯಕ್ಷ ಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಚಿಟ್ಟಾಣಿ ರಾಮಚಂದ್ರ ತಾತ ನೂರ್ ಕಾಲಬಾಳಲಿ
ಚಿಟ್ಟಾಣಿ ಅಜ್ಜ ನೀಡಿದ ಆದರ್ಶಗಳು ಇವತ್ಹಿನ ನಮ್ಮ ಯುವ ಯಕ್ಷ ಕಲಾವಿದರಿಗೆ ದಾರಿ ದೀಪ ವಾಗಲಿ
ಯಕ್ಷಗನಂ ಗೆಲ್ಗೆ -ಯಕ್ಷ ಗಾನಂ ಬಾಲ್ಗೆ